Thursday, December 24, 2020
ʻವ್ಯಂಗ್ಯಚಿತ್ರ - ಚರಿತ್ರೆʼ ನನ್ನ ಹೊಸ ಪುಸ್ತಕ
ವ್ಯಂಗ್ಯಚಿತ್ರ ಕಲೆ ಇಷ್ಟೊಂದು ಜನಪ್ರಿಯವಾಗಿ ಬೆಳೆದಿದ್ದರೂ ಕನ್ನಡದಲ್ಲಿ ಈ ಕಲೆಯ ಇತಿಹಾಸದ ಬಗ್ಗೆ, ಹಿರಿಮೆಯ ಬಗ್ಗೆ ಪುಸ್ತಕಗಳು ಪ್ರಕಟವಾದದ್ದು ತುಂಬ ವಿರಳ. ಈ ಕೃತಿ ಆ ಕೊರತೆಯನ್ನು ಹೋಗಲಾಡಿಸಲು ನೆರವಾದೀತು. ಈ ಕಲೆಯ ಇತಿಹಾಸದ ಬಗ್ಗೆ ಅವರು ಸಾಕಷ್ಟು ಮಾಹಿತಿ ಕಲೆಹಾಕಿದಲ್ಲದೇ ಅದಕ್ಕೆ ಪೂರಕವಾದ ಚಿತ್ರಗಳನ್ನು ಸಂಗ್ರಹಿಸಲು ವಹಿಸಿದ ಶ್ರಮವನ್ನು ಮೆಚ್ಚಬೇಕಾದದ್ದೇ. ಸಂಶೋಧನಾತ್ಮಕ ಗುಣಗಳನ್ನು ಹೊಂದಿದ ಲೇಖನಗಳ ಈ ಸಂಗ್ರಹ ಕನ್ನಡಿಗರೆಲ್ಲರೂ ಓದಲೇ ಬೇಕಾದ ಕೃತಿ.
ವಿ.ಜಿ.ನರೇಂದ್ರ
ಭಿನ್ನವಾದ ಬಹುಶಿಸ್ತೀಯ ಆಯಾಮಗಳಾದ ಮನೋವಿಜ್ಞಾನ, ಸಾಮಾಜಿಕ ಭಾಷಾವಿಜ್ಞಾನ ಮುಂತಾದ ಶಿಸ್ತುಗಳ ಹಿನ್ನೆಲೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ನೋಡಬಹುದು. ಅಂದರೆ ವ್ಯಂಗ್ಯವು ಬದುಕಿನ ವೈರುಧ್ಯಾತ್ಮಕ ನಡಾವಳಿಗಳ ಕುರಿತಂತೆ ಹೊಸದಾದ ತಿಳಿವನ್ನು ಕಟ್ಟುತ್ತದೆ. ಕಣ್ಣಿಗೆ ಕಾಣುವ ರೂಪವಾಗಿ, ಶಾಬ್ದಿಕ ಸಾಧ್ಯತೆಯನ್ನು ಪಡೆದಾಗ ವ್ಯಂಗ್ಯಚಿತ್ರ ನಾನಾರ್ಥಗಳಿಗೆ ಎಡೆಮಾಡಿಕೊಡುತ್ತದೆ. ಇದು ತರ್ಕದಿಂದಾಚೆಗಿನ ಭಾವನಾ ಜಗತ್ತನ್ನು ಪ್ರಚೋದಿಸುತ್ತಲೇ ರಾಜಕೀಯವಾಗಿ ಎಚ್ಚೆತ್ತ ನಾಗರಿಕ ಪ್ರಜೆಯ ಕಲ್ಪನೆಯನ್ನು ನಮ್ಮೆದುರು ಪ್ರತಿಪಾದಿಸುತ್ತದೆ. ಆದ್ದರಿಂದಲೇ ಈ ಹೊತ್ತಗೆಯು ಹೊಸ ತಿಳಿವನ್ನು ಕಟ್ಟುತ್ತದೆ.
ಡಾ. ಡೊಮಿನಿಕ್.ಡಿ
Subscribe to:
Post Comments (Atom)
No comments:
Post a Comment